ಬರಾಬರ್ ಗುಡ್ಡದ ಗುಹೆಗಳು ಭಾರತದಲ್ಲಿ ಉಳಿದುಕೊಂಡಿರುವ ಅತ್ಯಂತ ಹಳೆಯ ಕಲ್ಲಿನಲ್ಲಿ ಕೆತ್ತಿದ ಗುಹೆಗಳಾಗಿವೆ. ಇವುಗಳ ಕಾಲಮಾನ ಮೌರ್ಯ ಸಾಮ್ರಾಜ್ಯದಿಂದ (ಕ್ರಿ.ಶ. ೩೨೨-೧೮೫) ಎಂದು ಹೇಳಲಾಗಿದೆ. ಕೆಲವು ಅಶೋಕನ ಶಾಸನಗಳನ್ನು ಹೊಂದಿವೆ. ಇದು ಭಾರತದ ಬಿಹಾರ ರಾಜ್ಯದ ಜೆಹಾನಾಬಾದ್ ಜಿಲ್ಲೆಯ ಮಖ್‍ದುಂಪುರ್ ಪ್ರದೇಶದಲ್ಲಿ, ಗಯಾದ ೨೪ ಕಿ.ಮಿ. ಉತ್ತರಕ್ಕೆ ಸ್ಥಿತವಾಗಿದೆ. == ಬರಾಬರ್ ಗುಡ್ಡದಲ್ಲಿರುವ ಗುಹೆಗಳು == ಬರಾಬರ್ ಗುಡ್ಡದಲ್ಲಿ ನಾಲ್ಕು ಗುಹೆಗಳಿವೆ: ಕರನ್ ಚೌಪಾರ್, ಲೋಮಸ್ ರಿಶಿ, ಸುದಾಮಾ ಮತ್ತು ವಿಶ್ವಕರ್ಮ. === ಲೋಮಸ್ ಋಷಿ ಗುಹೆ === ಲೋಮಸ್ ಋಷಿಯ ಗುಹೆಯು ಪ್ರಾಯಶಃ ಬರಾಬರ್‌ನ ಅತ್ಯಂತ ಪ್ರಸಿದ್ಧ ಗುಹೆಯಾಗಿದೆ, ಇದರ ಸುಂದರವಾಗಿ ಕೆತ್ತಿದ ಬಾಗಿಲಿನ ಕಾರಣದಿಂದ. ಇದು ಬರಾಬರ್ ಗ್ರನೈಟ್ ಗುಡ್ಡದ ದಕ್ಷಿಣ ಬದಿಯಲ್ಲಿಅದೆ, ಮತ್ತು ಸುದಾಮಾ ಗುಹೆಯ ಪಕ್ಕದಲ್ಲಿದೆ. === ಸುದಾಮಾ ಗುಹೆ === ಸುದಾಮಾ ಗುಹೆಯು ಬರಾಬರ್ ಗ್ರಾನೈಟ್ ಗುಡ್ಡದ ದಕ್ಷಿಣ ಬದಿಯ ಮೇಲೆ ಸ್ಥಿತವಾಗಿದೆ. ಇದು ಲೋಮಸ್ ಋಷಿಗೆ ಹತ್ತಿರವಿದೆ. ಇದು ಬಹುಶಃ ಗುಂಪಿನಲ್ಲಿ ಅಗೆಯಲಾದ ಮೊದಲ ಗುಹೆಯಾಗಿದೆ. ಈ ಗುಹೆಯನ್ನು ಸಾಮ್ರಾಟ್ ಅಶೋಕನು ಕ್ರಿ.ಪೂ. ೨೫೭ರಲ್ಲಿ ಸಮರ್ಪಿಸಿದನು. === ಕರನ್ ಚೌಪಾರ್ ಗುಹೆ === ಕರನ್ ಚೌಪಾರ್ (ಅಥವಾ ಕರ್ಣ ಚೌಪಾರ್) ಬರಾಬರ್ ಗ್ರಾನೈಟ್ ಗುಡ್ಡದ ಉತ್ತರ ಬದಿಯಲ್ಲಿದೆ. ಇದು ಅವನ ಆಳ್ವಿಕೆಯ ಕಾಲದ ೧೯ನೇ ವರ್ಷದ ಕಾಲಮಾನದ್ದೆಂದು ನಿರ್ಧರಿಸಲಾದ ಅಶೋಕನ ಒಂದು ಶಾಸನವನ್ನು ಹೊಂದಿದೆ, ಅಂದರೆ ಸುಮಾರು ಕ್ರಿ.ಪೂ. ೨೫೦ರಲ್ಲಿ. === ವಿಶ್ವಕರ್ಮ ಗುಹೆ === ವಿಶ್ವ ಮಿತ್ರ ಎಂದೂ ಕರೆಯಲ್ಪಡುವ ವಿಶ್ವಕರ್ಮ ಗುಹೆಯನ್ನು ಕಡಿಬಂಡೆಯೊಳಗೆ ಕೆತ್ತಲ್ಪಟ್ಟ "ಅಶೋಕನ ಮೆಟ್ಟಿಲು"ಗಳಿಂದ ಪ್ರವೇಶಿಸಬಹುದು. ಇದು ನೂರು ಮೀಟರ್‌ಗಳಷ್ಟಿದ್ದು ಮುಖ್ಯ ಗ್ರಾನೈಟ್ ಗುಡ್ಡದ ಸ್ವಲ್ಪ ಪೂರ್ವದಲ್ಲಿದೆ. == ನಾಗಾರ್ಜುನಿ ಗುಹೆಗಳು == ನಾಗಾರ್ಜುನಿ ಗುಡ್ಡದ ಹತ್ತಿರದ ಗುಹೆಗಳನ್ನು ಬರಾಬರ್ ಗುಹೆಗಳ ಕೆಲವು ದಶಕಗಳ ನಂತರ ನಿರ್ಮಿಸಲಾಯಿತು. ಇವನ್ನು ಅಶೋಕನ ಮೊಮ್ಮಗ ಮತ್ತು ಉತ್ತರಾಧಿಕಾರಿಯಾದ ದಶರಥ ಮೌರ್ಯನು ಸಮರ್ಪಿಸಿದನು. === ಗೋಪಿಕಾ ಗುಹೆ === ಗೋಪಿ ಅಥವಾ ಗೋಪಿ ಕಾ ಕುಭಾ ಅಥವಾ ಸರಳವಾಗಿ ನಾಗಾರ್ಜುನಿ ಎಂದೂ ಕರೆಯಲ್ಪಡುವ ಗೋಪಿಕಾ ಗುಹೆಯು ಬರಾಬರ್ ಸಂಕೀರ್ಣದ ಎಲ್ಲ ಗುಹೆಗಳ ಪೈಕಿ ಅತಿ ದೊಡ್ಡದು. ಇತರ ಗುಹೆಗಳಿಗೆ ಭಿನ್ನವಾಗಿ, ಕೋಣೆಯ ಎರಡೂ ತುದಿಗಳು ವೃತ್ತಾಕಾರವಾಗಿರುವ ವಿಶಿಷ್ಟತೆಯನ್ನು ಹೊಂದಿವೆ. === ವದಥೀಕ ಮತ್ತು ವಪೀಯಕ ಗುಹೆಗಳು === ಈ ಎರಡು ಗುಹೆಗಳು ಗುಡ್ಡದ ಉತ್ತರ ಬದಿಯ ಮೇಲೆ ಸ್ವಲ್ಪ ಎತ್ತರದಲ್ಲಿವೆ. ವದಥೀಕ ಗುಹೆ. ಇದು ಬಂಡೆಯ ಒಂದು ಕೊರಕಲಿನಲ್ಲಿ ಸ್ಥಿತವಾಗಿದೆ. ಈ ಗುಹೆಯನ್ನು ದಶರಥ ಮೌರ್ಯನು ಆಜೀವಿಕ ಪಂಥಕ್ಕಾಗಿ ಸಮರ್ಪಿಸಿದನು. ವಪೀಯಕ ಗುಹೆ, "ಬಾವಿ ಗುಹೆ" ಎಂದೂ ಕರೆಯಲ್ಪಡುತ್ತದೆ. ಇದು ಕೂಡ ಆಜೀವಿಕರ ಪಂಥಕ್ಕೆ ದಶರಥನು ಸಮರ್ಪಿಸಿದನು. == ಟಿಪ್ಪಣಿಗಳು == == ಉಲ್ಲೇಖಗಳು == , .. (1994). (2nd .). , , : . 0300062176. {{ }}: |= () , (1989). (1 .). , : . 0140081445. {{ }}: |= () == ಹೆಚ್ಚಿನ ಓದಿಗೆ == , ; , (1995). : . . . 247. 9780521376952. == ಹೊರಗಿನ ಕೊಂಡಿಗಳು == .. ,